ದಶಕದ ಹಿಂದೆ ಬರೆದ ಕಾದಂಬರಿ ಇದು. ನನ್ನ ಪ್ರಥಮ ಕಾದಂಬರಿ (ನಂತರದಲ್ಲಿ ಯಾವ ಕಾದಂಬರಿಯನ್ನೂ ಪೂರ್ಣಗೊಳಿಸಲಾಗಿಲ್ಲ) ಆಗ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದ ನಕ್ಸಲ್ ಹೋರಾಟ, ಬಾಂಬ್ ಎಸ್ ಐ ಸಂಗತಿಗಳೆಲ್ಲ ಇದರಲ್ಲಿ ಪಾತ್ರಗಳಾಗಿವೆ. ಭಾವನಾತ್ಮಕವಾಗಿ ಬರೆದ ಪುಸ್ತಕವಾದ್ದರಿಂದ ಉತ್ತಮ ಕಾದಂಬರಿಯಂತೂ ಅಲ್ಲ! ಓದಿಸಿಕೊಂಡು ಹೋಗುತ್ತೆ, ಒಂದಷ್ಟು ತತ್ವ ಸಿದ್ಧಾಂತಗಳ ಚರ್ಚೆಯೂ ಆಗುತ್ತೆ.