ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಸಂಗೀತ ಆಲಿಸುವ ಅದ್ಭುತ ಅನುಭವವನ್ನು ಪಡೆಯಲು ಬಯಸುವಿರಾ?
ಇಲ್ಲಿದೆ ಪೈ ಮ್ಯೂಸಿಕ್ ಪ್ಲೇಯರ್ ನಿಮಗಾಗಿ. ಸುಂದರ ಚಿತ್ರವಿನ್ಯಾಸ, ಕಣ್ಸೆಳೆಯುವ ರೂಪ, ಅತ್ಯದ್ಭುತ ವೈಶಿಷ್ಟ್ಯಗಳೊಂದಿಗೆ.
ಈ ಉತ್ಕೃಷ್ಟ ಗುಣಮಟ್ಟದ ಮ್ಯೂಸಿಕ್ ಪ್ಪ್ಲೇಯರ್, ಸಂಗಿತದ ನಿಮ್ಮ ಎಲ್ಲಾ ಅಗತ್ಯತೆಗಳನ್ನು ಪೂರೈಸುತ್ತದೆ.
ಅಂತರ್ ನಿರ್ಮಿತ ಈಕ್ವಲೈಝರ್ ಸಂಗೀತ ಕೇಳುವಿಕೆಯ ನಿಮ್ಮ ಅನುಭವವನ್ನು ಶ್ರೀಮಂತಗೊಳಿಸುತ್ತದೆ.
ಆಕರ್ಷಕ ವಿನ್ಯಾಸ, ಸರಳವಾದ ಚೌಕಟ್ಟುಗಳು.
ಉನ್ನತೀಕರಿಸಿದ ಫೋಲ್ಡರ್ ನೋಟದಿಂದಾಗಿ ನೀವು ಸಂಗೀತದ ಕಡತವನ್ನು ಸುಲಭವಾಗಿ ಹುಡುಕಬಹುದಾಗಿದೆ.
ಪೈ ಪವರ್ ಶೇರ್- ಇದು ಸಂಗಿತ ಕಡತವನ್ನು ಇತರರೊಂದಿಗೆ ಸುರಕ್ಶಿತವಾಗಿ ಹಂಚಿಕೊಳ್ಳುವ ವೈಶಿಷ್ಟ್ಯವಾಗಿದ್ದು, ಇಲ್ಲಿ ಕಡತವನ್ನು ಬಿಡಿಬಿಡಿಯಾಗಿ ಅಲ್ಲದೆ, ಬಹುಆಯ್ಕೆಯ ಹಾಡುಗಳು, ಸಂಗೀತ ಗುಚ್ಚಗಳು, ಬಹುಆಯ್ಕೆಯ ನುಡಿಸುಪಟ್ಟಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ, ಅದೂ ವಿಶ್ವದಾದ್ಯಂತ ಎಲ್ಲಾದರೂ ಯಾರೊಂದಿಗಾದರೂ. ಹೆಚ್ಚಿನ ವಿವರಗಳಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ - http://100pilabs.com/powershare.html
ಯಾವುದೇ ಹಾಡನ್ನು ನಿಮ್ಮ ಫೋನಿನ ಕರೆಧ್ವನಿಯನ್ನಾಗಿ ಹೊಂದಿಸಿಕೊಳ್ಳಿ.
ಮಾತ್ರವಲ್ಲ ಯಾವುದೇ ಹಾಡಿನ ಯಾವುದೇ ಭಾಗವನ್ನು ಕತ್ತರಿಸಿ, ಅದನ್ನು ಕರೆಧ್ವನಿಯನ್ನಾಗಿಸಿ ಇಟ್ಟುಕೊಳ್ಳಬಹುದು ರಿಂಗ್ ಟೋನ್ ಕಟ್ಟರ್ ನ ಮೂಲಕ.
ವೈಶಿಷ್ಟ್ಯಗಳು:
ಅಂತರ್ ನಿರ್ಮಿತ ೫ ಬ್ಯಾಂಡಿನ ಈಕ್ವಲೈಝರ್.
ಸಂಗೀತ ಕಡತವನ್ನು ಕತ್ತರಿಸಲು ರಿಂಗ್ ಟೋನ್ ಕಟ್ಟರ್.
ಪೈ ಪವರ್ ಶೇರ್.
ಉನ್ನತೀಕರಿಸಿದ ಫೋಲ್ಡರ್ ನೋಟಗಳು.
ಸ್ವಯಂಚಾಲಿತ ಸಮಯ ನಿಯಂತ್ರಣ
ಪಕ್ಕಕ್ಕೆ ಉಜ್ಜಿ ತಳ್ಳುವ ಮೂಲಕ ಹಾಡನ್ನು ಬದಲಾಯಿಸುವ ಆಯ್ಕೆ.
ಹಾಡು, ಪ್ರಕಾರ, ಕಲಾವಿದ- ಇತ್ಯಾದಿ ಮಾಹಿತಿಗಳನ್ನು ಸಂಪಾದಿಸುವ ಆಯ್ಕೆ.
ಸುಂದರ, ಆಕರ್ಷಕ, ಅಷ್ಟೇ ಸರಳವಾದ ಇಂಟರ್ ಫೇಸ್, ಮತ್ತು ನಿಯಂತ್ರಣಗಳು.
ಈ ಮೊದಲೇ ಸೇರಿಸಲಾಗಿರುವ ವಿಸ್ಮಯಕರ ಚಿತ್ರವಿನ್ಯಾಸಗಳು.
ಚಿತ್ರವಿನ್ಯಾಸಕ್ಕಾಗಿ ನಿರ್ಮಿಸಿರುವ ೨೫ ಆಕರ್ಷಕ ಹಿನ್ನೆಲೆ ಚಿತ್ರಗಳು- ಪ್ರತ್ಯೇಕ ಖರೀದಿಗಾಗಿ ಮಾತ್ರ.
ಫೋನ್ ಪರದೆ ಲಾಕ್ ಆಗಿರುವಾಗಲೂ ಲಭ್ಯವಿರುವ ನಿಯಂತ್ರಣಗಳು.
ಹಿತವಾದ ಅನಿಮೇಶನ್ ಪ್ರಭಾವಗಳು.
ವಿಜೆಟ್ ಬೆಂಬಲ.
ಪೈ ಮ್ಯೂಸಿಕ್ ಪ್ಲೇಯರ್ ಉಚಿತ ಕಿರುತಂತ್ರಾಂಶವಾಗಿದೆ.(ಅಂತರಿಕ ಜಾಹೀರಾತು ಪ್ರದರ್ಶನದ ಬೆಂಬಲದೊಂದಿಗೆ)
ಸಂಗೀತ ಆಲಿಸುವ ಅನುಭವವನ್ನು ಶ್ರೀಮಂತವಾಗಿಸುವಲ್ಲಿ ಮತ್ತು ಈ ಮ್ಯೂಸಿಕ್ ಪ್ಲೇಯರನ್ನು ಪರಿಪೂರ್ಣವಾಗಿ ಮಾಡಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ.
ಯಾವುದೇ ಸಂದರ್ಭದಲ್ಲಿ, ಈ ಕಿರುತಂತ್ರಾಂಶದಲ್ಲಿ ಸಮಸ್ಯೆ ಅಡಚಣೆಯೇನಾದರೂ ಕಂಡುಬಂದಲ್ಲಿ, ನಮಗೆ ಮಿಂಚೆಯನ್ನು ಕಳಿಸುವ ಮೂಲಕ ನಮ್ಮ ಗಮನಕ್ಕೆ ತನ್ನಿ.
ಕಂಡಿತವಾಗಿ ನಾವು ಆದಷ್ಟು ಬೇಗ ಆ ಸಮಸ್ಯೆ ಅಡಚಣೆಗಳಿಗೆ ಪರಿಹಾರವನ್ನು ಕಂಡುಹಿಡಿಯುತ್ತೇವೆ.
ಈ ಕಿರುತಂತ್ರಾಂಶದ ಬಗ್ಗೆ ನಿಮ್ಮ ಸಲಹೆ ಸೂಚನೆ, ದೂರುಗಳಿಗೆ ಸದಾ ಸ್ವಾಗತವಿದೆ.
ನಮ್ಮ ಮಿಂಚೆ:
[email protected]ನಾವು ನಿಮ್ಮ ಪ್ರತಿಕ್ರಿಯೆಗಳಿಗೆ ಕಂಡಿತ ಉತ್ತರಿಸುತ್ತೇವೆ.